Thursday, July 14, 2016

... ಮೇಘ ಬಂತು ಮಳೆ ಬಿತ್ತು ಭೂಮಿ ಹಸಿಯಾಯ್ತು

ಮೇಘ ಬಂತು ಮಳೆ ಬಿತ್ತು ಭೂಮಿ ಹಸಿಯಾಯ್ತು 
ಗಾಲಿ ಬೀಸಿದ ಕ್ಷಣವೇ ಮಳೆ ಹೋಯ್ತು ಹಾಗೆ ಮೇಘ ಎಲ್ಲಿಗೋ ಒಂಟೋಯ್ತು  || ಮೇಘ ಬಂತು ||

ಏನೋ ಈ ಗಾಲಿ ಒಂತರ ಏನಾದರು ಅದೊಂತರ
ಈ ಗಾಲಿ ಇಲ್ಲದೆ ಜೀವನ ಕಷ್ಟ ಆಗೊತರ ಆಗಿದೆ 

ಗಾಲಿ ಇಂದೇ ಜೀವ ಉಸಿರು
ಮಳೆ ಇಂದ ಭೂಮಿ ಹಸಿರು 
ಬೆಲೆ ಇಂದ ಜೀವಗೆ ಆಹಾರ
ಶಕ್ತಿ ಇಂದ ಕಾಲ ಮಮಕಾರ  || ಮೇಘ ಬಂತು ||

ಮಳೆ ಸೃಷ್ಟಿಗೆ ಅವಸರ ಜಗತಿಗೆ ನಿತ್ಯವಸರ ಜೀವಕ್ಕೆ ಪ್ರಾಣಾಧಾರ
ಮಳೆ ಭೂಮಿಗೆ ಹಸಿರು ಆದರೆ ಜೀವಗೆ ಆಹಾರ ಪ್ರಾಣಿಗೆ ಸಹಕಾರ

ಗಾಲಿ ಮಳೆ ಜೊತೆ ಆದರೆ ಮೇಘ ಮಹಾ ಭಯಂಕರ ರೂಪ
ಮೇಘ ದ್ವನಿಯ ಮಿಂಚು ಮಹಾ ಶಕ್ತಿಯ ಮಹೋತ್ತರ ಗರ್ಜನೆ   || ಮೇಘ ಬಂತು ||

No comments:

Post a Comment